ಯೌವನದಲ್ಲಿ ಎಲ್ಲರೂ ಕವಿಗಳಾಗುತ್ತಾರೆ. ಏಕೆ ಎಂದು ಯೋಚಿಸುತ್ತ ಕುಳಿತಿದ್ದೆ, ಮೊನ್ನೆ. ಹೀಗೆ ಯೋಚಿಸುತ್ತ ಎಲ್ಲೋ ಯಾವಾಗಲೋ ಓದಿದ್ದ ವಾಕ್ಯ ನೆನಪಾಯಿತು. ಏನಪ್ಪಾ ಅಂದ್ರೆ ಸತ್ಯ ಹೇಳುವುದಕ್ಕೆ ಬುದ್ಧಿವಂತಿಕೆ ಬೇಡ, ಆದರೆ ಸುಳ್ಳು ಹೇಳುವುದಕ್ಕೆ ಧೈರ್ಯ, ಮತ್ತು ಆ ಸುಳ್ಳನ್ನು ಸಾಧಿಸಲು ಬೇಕಾಗುವ ಬುದ್ಧಿವಂತಿಕೆ ಎರಡೂ ಬೇಕು ಅಂತ.
ಇದನ್ಯಾಕಪ್ಪಾ ಹೇಳ್ದೆ ಅಂದ್ರೆ, ಹರೆಯ ಅಥವಾ ಯೌವನದಲ್ಲಿ ಮನಸ್ಸಿನ ಭಾವನೆಗಳು ಹುಚ್ಚು ಕುದುರೆಗಳ ರೀತಿಯಲ್ಲಿ ಓಡುತ್ತಿರುತ್ತದೆ. ಲೋಕವೆಲ್ಲ ಶೃಂಗಾರಮಯವಾಗಿ ಕಾಣುತ್ತಿರುತ್ತದೆ. ಮನಸ್ಸು ಮೊದಲ ಪ್ರಾಮುಖ್ಯವನ್ನು ಈ ಭಾವನೆಗಳಿಗೇ ಕೊಡುತ್ತದೆ. ಅದನ್ನು ಅಕ್ಷರ ರೂಪಕ್ಕೆ ಇಳಿಸುವುದಷ್ಟೆ ಉಳಿಯುವುದು, ಕವನ ತಯಾರಾಗುವುದಕ್ಕೆ.
ಹಾಗಾದರೆ ಕವಿಗಳು ತುಂಬಾ ವಯಸ್ಸಾದವರು ಇದಾರಲ್ಲಾ? ಇದಕ್ಕೆ ಕಾರಣ ಇಷ್ಟೆ. ಹರೆಯದಲ್ಲಿ ಶೃಂಗಾರ ಭಾವದಿಂದ ಹೊಮ್ಮುವ ಸಾಹಿತ್ಯದ ಮೇಲೆ ಅವರು ಪ್ರೀತಿಯನ್ನು ಬೆಳೆಸಿಕೊಂಡಿರುತ್ತಾರೆ. ಆದ್ದರಿಂದಲೇ ವಯಸ್ಸಿಗೆ ಅತೀತರಾಗಿ ಕವಿಗಳೋ ಅಥವಾ ಸಾಹಿತಿಗಳೋ ಆಗುತ್ತಾರೆ.
ಇದನ್ನು ಮುಂದೊಂದು ದಿನ ಮುಂದುವರೆಸುತ್ತೇನೆ.
3 comments:
ಚನ್ನಾಗಿ ಬರೆದಿದ್ದೀರಿ... ಹಿರಿಯ ಕವಿಗಳು ಇಂದೂ ಕೂಡ ಕಾವ್ಯದ ಮೂಲಕ ಯುವಕರಾಗೆ ಇದ್ದಾರೆ...
ಧನ್ಯವಾದಗಳು ಮನಸ್ವಿ ... ಕಲಾವಿದರು ಹೆಚ್ಚು ಕಾಲ ಯೌವನವನ್ನ ಅನುಭವಿಸುತ್ತಾರೆ.
/* off topic */
ಲೋ, ಸಂಪದಕ್ಕೆ ಯಾವಾಗಿಂದ ಬಂದೆ? :) good good!
Post a Comment