Thursday, June 18, 2009

ರಾಮ ವಾಲಿಯನ್ನು ಮರೆಯಿಂದ ಕೊಂದಿದ್ದು ಸರಿ?

ಯಾರೇ ತನ್ನೆದುರಿಗೆ ಯುದ್ಧಕ್ಕೆ ಬಂದರೂ ಅವರ ಅರ್ಧ ಶಕ್ತಿ ತನಗೆ ಬರಬೇಕು ಎನ್ನುವ ವರವನ್ನು ವಾಲಿ ಪಡೆದಿದ್ದು ನಮಗೆ ಗೊತ್ತೇ ಇದೆ. ಅದಕ್ಕೆ ಅವನು ಸುಗ್ರೀವನ ಹೆಂಡತಿಯನ್ನು ಇಟ್ಟುಕೊಂಡರೂ ಸುಗ್ರೀವ ಅಸಹಾಯಕನಾಗಿ ರಾಮನ ಸಹಾಯ ಬೇಡಿದ. ರಾಮ ಒಪ್ಪಿ, ನೀವಿಬ್ಬರೂ ಹೊಡೆದಾಡುವಾಗ ನಾನು ಮರೆಯಲ್ಲಿ ನಿಂತು ವಾಲಿಯನ್ನು ಕೊಲ್ಲುತ್ತೇನೆ ಎಂದ. ಹಾಗೆಯೇ ಮಾಡಿದ ಕೂಡ.
ರಾಮ ಬಾಣವೇನೋ ಬಿಟ್ಟ. ವಾಲಿಗೆ ಪೆಟ್ಟಾಗಿ ಮರಣಶಯ್ಯೆಗೆ ಹೋದ. ರಾಮನನ್ನು ನೋಡಿ ವಾಲಿ ಹೇಳಿದ. "ನಾವು ಮೃಗಗಳು. ನಿಮ್ಮ ಹಾಗೆ ಮನುಷ್ಯರಲ್ಲ. ನಮ್ಮಲ್ಲಿ ನಿಮ್ಮ ಹಾಗೆ ಒಂದು ಹೆಣ್ಣಿಗೆ ಒಂದು ಗಂಡು ಅನ್ನುವ ನಿಯಮ ಇಲ್ಲ." ಪಶ್ಚಾತ್ತಾಪಗೊಂಡ ರಾಮ "ಹಾಗಾದರೆ ನಂಗೆ ಮುಂದಿನ ಜನ್ಮದಲ್ಲಿ ಹೀಗೆಯೇ ಸಾವು ಬರಲಿ" ಅಂದ. ಅದಕ್ಕೆ ಕೃಷ್ಣಾವತಾರದಲ್ಲಿ ಅರಳಿ ಮರದ ಕಟ್ಟೆಯ ಮೇಲೆ ಕೃಷ್ಣ ಕುಳಿತಾಗ ಅವನ ಕಾಲನ್ನು ನೋಡಿ, ಜಿಂಕೆ ಎಂದು ಪರಿಭವಿಸಿ, ಬೇಡನೊಬ್ಬ ಕೃಷ್ಣನಿಗೆ ಬಾಣಬಿಟ್ಟು, ಕೃಷ್ಣಾವತಾರ ಕೊನೆಗೊಳಿಸಿದ ಎಂದು ಮೇಧಾವಿಗಳು ವಿಶ್ಲೇಷಿಸುತ್ತಾರೆ.
ಇಲ್ಲೇ ಉದ್ಭವ ಆಯ್ತು ಒಂದು ಪ್ರಶ್ನೆ. ವಾಲಿ, ತಾನೇ ಹೇಳಿದ ತಾವು ಮೃಗಗಳು ನಾವು ಯಾರ ಹೆಂಡತಿಯನ್ನಾದರೂ ಇಟ್ಟುಕೊಳ್ಳಬಹುದು ಎಂದು. ಹಾಗಿದ್ದಲ್ಲಿ, ಮರೆಯಲ್ಲಿ ನಿಂತು ಒಂದು ಮೃಗಕ್ಕೆ ಬಾಣ ಹೊಡೆದದ್ದು ತಪ್ಪಲ್ಲವಲ್ಲ. ಅಥವಾ ಬೇಟೆಯ ನಿಯಮದ ಪ್ರಕಾರ ತಿನ್ನುವುದಾದಲ್ಲಿ ಮಾತ್ರ ಮರೆಯಿಂದ ಪ್ರಾಣಿ ಹತ್ಯೆ ಮಾಡಬಹುದೇ? ಆಮೇಲೇ, ಸರಿಯೇ ತಪ್ಪೇ, ವಾಲಿಯನ್ನು ಕೊಲ್ಲಬೇಕಾದರೆ, ಅವನಿಗೆ ಗೊತ್ತಾಗದಂತೆಯೇ ಕೊಲ್ಲಬೇಕಿತ್ತಲ್ಲ (ಅವನ ವರದ ದೆಸೆಯಿಂದ).
ಪಾಪ ಕೃಷ್ಣಾವತಾರದ ಕೃಷ್ಣ ಅನ್ನಿಸ್ತು ನಂಗೆ!

3 comments:

shreeshum said...

sari andare sari tappu andare tappu
purana tarkada mele vadisuvavana takattina mele nintide.

ಮೃತ್ಯುಂಜಯ ಹೊಸಮನೆ said...

ರಾಮ ಯಾಕೆ ವಾಲಿಯನ್ನು ಹಾಗೆ ಕೊಲ್ಲಬಾರದಿತ್ತು?

Gowtham said...

ರಾಮ ಕೊಂದಿದ್ದು ಸರಿ ಆದರೆ, ಪ್ರತಿಯೊಂದಕ್ಕೂ ಕಾರಣವಿರುವ ಮಹಾಭಾರತದಲ್ಲಿ, ಕೃಷ್ಣನ ಸಾವು ಯಾಕೆ ಹಿಂದಿನಿಂದ ಜಿಂಕೆ ಎಂದು ಹೊಡೆದ ಬಾಣದಿಂದ ಆಗಬೇಕು? ನಾನು ಓದಿದ ಯಾವುದೋ ಲೇಖನದ ಪ್ರಕಾರ ರಾಮ ವಾಲಿಯನ್ನು ಹಾಗೆ ಕೊಂದಿದ್ದಕ್ಕೆ ಕೃಷ್ಣನ ಆ ರೀತಿ ಸಾವಿಗೆ ಕಾರಣ. ರಾಮನದು ತಪ್ಪಿಲ್ಲ ಅಂತಾದರೆ, ಕೃಷ್ಣನು ಆ ರೀತಿ ಸಾಯಬಾರದಿತ್ತು, ಅದಕ್ಕೆ ಮತ್ತೇನಾದರೂ ಕಾರಣ ಇದೆಯಾ ಅನ್ನುವುದು ನನ್ನ ಸಂದೇಹ.