ಯಮಧರ್ಮನ ವರಪ್ರಸಾದದಿಂದ ಜನಿಸಿದ ಯುಧಿಷ್ಠಿರ ತನ್ನ ಧರ್ಮ ಪಾಲನೆಯಿಂದ ಧರ್ಮರಾಯನೆಂದೇ ಕರೆಸಿಕೊಂಡದ್ದು ನಮಗೆಲ್ಲ ತಿಳಿದ ವಿಷಯ. ಆದರೂ ಅಶ್ವತ್ಥಾನ ಮೃತಹೊಂದಿದ ಎಂದು ಹೇಳಿದ್ದಕ್ಕೆ, ಧರ್ಮರಾಯನಿಗೆ ಒಂದು ದಿನ ನರಕವನ್ನು ನೋಡುವ ಶಿಕ್ಷೆ ವಿದಿಸಲಾಯಿತು ಎಂದು ಹೇಳುತ್ತಾರೆ. ಆ ಹೆಸರಿನ ಆನೆ ಒಂದು ನಿಜವಾಗಿ ಸತ್ತಿದ್ದರೂ, ಅದನ್ನು ಹೇಳಿದ ರೀತಿ ದ್ರೋಣಾಚಾರ್ಯರ ಮಗ ಅಶ್ವತ್ಥಾನನ ಮರಣದ ವಾರ್ತೆಯಂತಿತ್ತು. ಹೀಗಿದ್ದಾಗ ನನಗೊಂದು ಸಂದೇಹ. ಪಾಂಡವರ ಕೌರವರ ಜೋಜಿನಲ್ಲಿ ದ್ರೌಪದಿಯನ್ನೇ ಜೂಜಿಗಿಟ್ಟಿದ್ದಕ್ಕೆ, ಯಾಕೆ ಧರ್ಮರಾಯನಿಗೆ ಏನೂ ಶಿಕ್ಷೆಯ ಪ್ರಸ್ತಾಪ ಆಗಿಲ್ಲ?
/* ಈ ಪ್ರಶ್ನೆಗೆ ಉತ್ತರಿಸಲು ಎಲ್ಲರಿಗೂ ಆಹ್ವಾನವಿದೆ. */
4 comments:
ಪುರಾಣಕ್ಕೆ ಪ್ರಶ್ನೆ ಕೇಳಬಾರದಂತೆ ಆದರೂ ನೀವು ಕೇಳಿದ ಪ್ರಶ್ನೆಗೆ ಉತ್ತರಿಸುವವರಲ್ಲಿ ನನ್ನ ಎರಡನೆಯ ಪ್ರಶ್ನೆ.
ದ್ರೌಪತಿಯ ಪಾಂಡವರೆಲ್ಲರಿಗೂ ಧರ್ಮರಾಯನಷ್ಟೇ ಹಕ್ಕು ಪಾಂಚಾಲಿಯ ಮೇಲಿದೆ ಹಾಗಿದ್ದಾಗ ಕೇವಲ ಧರ್ಮರಾಯ ತಮ್ಮಂದಿರ ಅಭಿಪ್ರಾಯವನ್ನೂ ಕೇಳದೆ ಹೇಗೆ ಅವಳನ್ನು ಪಣವಾಗಿರಿಸಬಲ್ಲ?
ಅಯ್ಯೋ, ನಿಮ್ಮ ಪ್ರಶ್ನೆಯಿಂದ ನನಗೆ ಮತ್ತೊಂದು ಪ್ರಶ್ನೆ ಎದುರಾಗ್ತಿದೆಯಲ್ಲ, ಧರ್ಮರಾಯ ತಮ್ಮಂದಿರ ಅಭಿಪ್ರಾಯ ಕೇಳದೆ ದ್ರೌಪದಿಯನ್ನು ಪಣವಾಗಿರಿಸಿದನೇ?
ಮಹಾಭಾರತದ ಕಾಲದಲ್ಲಿ ಹೆಣ್ಣು ಕೂಡ ಗಂಡನ ಸ್ವತ್ತು, ಅವಳ ಮೇಲಿನ ಅವನ ಹಕ್ಕು ಪ್ರಶ್ನಾತೀತ ಎಂಬ ಭಾವನೆ ಪ್ರಚಲಿತದಲ್ಲಿ ಇದ್ದಿರಬಹುದು.ಪತ್ನಿ ಉಳಿದ ಆಸ್ತಿಗಳಂತೆಯೇ ಎಂದಾದಾಗ, ಅವಳನ್ನು ಒತ್ತೆಯಿಟ್ಟರೆ ಅದು ತಪ್ಪೇ ಅಲ್ಲವಲ್ಲ! ಶಿಕ್ಷೆ ಯಾಕೆ?ಸ್ವತಃ ದ್ರೌಪದಿ ಕೂಡ, ಧರ್ಮರಾಯನಿಗೆ, ತನ್ನನ್ನು ಜೂಜಿನಲ್ಲಿ ಒತ್ತೆಯಿಡುವ ಹಕ್ಕಿಲ್ಲ ಎಂದು ಭಾವಿಸುವುದಿಲ್ಲ. ತನ್ನನ್ನೂ ತಾನು ಜೂಜಿನಲ್ಲಿ ಸೋತ ಅನಂತರ ಧರ್ಮರಾಯನಿಗೆ ತನ್ನನ್ನು ಒತ್ತೆ ಇಡುವ ಹಕ್ಕಿಲ್ಲ ಎಂದು ಹೇಳುತ್ತಾಳೆ. ಕುಮಾರವ್ಯಾಸ ಈ ಪದ್ಯ ಗಮನಿಸಿ.(ಓದಿಗೆ ಸುಲಭವಾಗಲಿ ಎಂದು ಸಂಧಿಗಳನ್ನು ಬಿಡಿಸಿ ಬರೆಯಲಾಗಿದೆ!)
ಮುನ್ನ ತನ್ನನು ಸೋತ ಬಳಿಕಿನ್ನು ಎನ್ನ ಸೋತರೆ ಸಲುವುದೇ.. ಸಂಪನ್ನ ವಿಮಲ ಜ್ಞಾನರು ಅರಿದು ಈ ಪ್ರಶ್ನೆಗುತ್ತರವ.. ಎನ್ನ ಮೆಚ್ಚಿಸಿಕೊಡಲಿ...
ಇದೇ ಹಿನ್ನೆಲೆಯಲ್ಲಿ ಮೂರ್ತಿಯವರ ಪ್ರಶ್ನೆಗೂ ಉತ್ತರ ಊಹಿಸಬಹುದು!
ಹೂಂ! ಈಗ ಸಂದೇಹ ಪರಿಹಾರವಾಯಿತು. :-)
Post a Comment