Wednesday, August 26, 2009

ದೇಹ, ಸಾವು ಮತ್ತು ಆತ್ಮ...

ಜ್ಞಾನಿಗಳು ಹೇಳ್ತಾರೆ ಜೀರ್ಣವಾಗಿರೊ ದೇಹವನ್ನು ಆತ್ಮ ತೊರೆದು ಹೋಗುವುದೇ ಸಾವು ಅಂತ. ಆತ್ಮ ಚಿರಾಯು ಸಾವು ಇರುವುದು ದೇಹಕ್ಕೆ ಮಾತ್ರ ಅಂತಾನು ಹೆಳ್ತಾರೆ. ಅದೇನೆ ಇರಲಿ..

ನಾನೇಕೆ ಸಾವು, ಆತ್ಮ ಅಂತೆಲ್ಲ ಮಾತಾದ್ತಿಡಿನಿ ಅಂದ್ರೆ, ಕಳೆದ ಕೆಲವು ದಿನಗಳ ಹಿಂದೆ ನಮ್ಮಜ್ಜಿ ತೀರಿಹೋದರು.ಅದೇ ದಿನ ನನ್ನ ಅಕ್ಕನ ಗೆಳತಿಯ ಮಗನೂ ರಸ್ತೆ ಅಪಘಾತದಲ್ಲಿ ಕೊನೆಉಸಿರೆಳೆದಿದ್ದ. ನಮ್ಮಜ್ಜಿಗೆ ೮೩ ವರ್ಷ ಆಗಿತ್ತು. ದೇಹ ಜೀರ್ಣ ಆಗಿತ್ತು ಅಂದುಕೊಳ್ಳಿ. ಆದರೆ ಆ ಹುಡುಗನ ವಯಸ್ಸು ಕೇವಲ ೧೯! ಈ ಸಾವನ್ನು ಸಮರ್ಥಿಸಿಕೊಳ್ಳುವುದು ಹೇಗೆ? ೧೯ ವರ್ಷಕ್ಕೆ ದೇಹ ಜೀರ್ಣವಾಗಿತ್ತಾ?!

ದೇಹ ಜೀರ್ಣವಾಗಲು ಕೇವಲ ವಯಸ್ಸು ಮಾತ್ರ ಕಾರಣ ಅಲ್ಲ ಅಂತ ಅರ್ಥೈಸಿಕೊಳ್ಳಬಹುದೇ? ಅಪಘಾತದಿಂದಾಗಿ ಅವನ ದೇಹ ಜೀರ್ಣವಾಗಿ ಆತ್ಮ ತೊರೆದು ಹೋಯಿತೆ? ಆದರು ನನಗಿರುವ ದ್ವಂದ್ವ ಏನೆಂದರೆ, ದೇಹದ ದೆಸೆಯಿಂದಾಗಿ ಆತ್ಮ ದೇಹವನ್ನು ತೊರೆಯುವುದೋ ಅಥವಾ ಆತ್ಮದ ಇಚ್ಚೆಯಂತೆ ದೇಹವು ಜರ್ಜರಿತವಾಗುವುದೋ?

5 comments:

Gowtham said...

ದೇಹ ಜೀರ್ಣವಾದಾಗ ಆತ್ಮ ತೊರೆದು ಹೋಗುತ್ತದೆ ಎನ್ನುವುದು ಒಂದು ನಂಬಿಕೆ. ಅದಕ್ಕಿಂತ ಒಂದು ಕೈ ಮೇಲಿನ ನಂಬಿಕೆ ಎಂದರೆ, ಆಯುಷ್ಯ ಮುಗಿದಾಗ ಆತ್ಮ ಒಂದು ದೇಹವನ್ನು ಬಿಟ್ಟು ಮತ್ತೊಂದಕ್ಕೆ ಹೋಗುತ್ತದೆ ಎಂಬುದು. ಆಯುಷ್ಯ ನಿರ್ಧರಿಸುವ ಬ್ರಹ್ಮ ಬರೆದ ಹಣೆಬರಹದ ಪ್ರಕಾರ ಯಮ ಬಲಿ ತೆಗೆದುಕೊಳ್ಳುತ್ತಾನಂತೆ. ಯಮ ಮಹಾನ್ ಧರ್ಮಿಷ್ಠ, ಒಂದು ವೇಳೆ ಇದನ್ನು ನಾವು ನಂಬದೇ ಹೋದರೆ, ಬ್ರಹ್ಮ ಬರೆದ ಜಾತಕದಲ್ಲಿ ಯಮ ಅತಿಕ್ರಮ ಪ್ರವೇಶ ಮಾಡಿದನೇನೋ?!

Unknown said...

ಸಾವು ಎಂಬ ಕ್ರಿಯೆ ಮಾನವಾತೀತ. ಯಾವ ನಂಬಿಕೆ ಮನಸ್ಸಿಗೆ ಸಮಾಧಾನ ನೀಡುತ್ತದೆಯೋ ಅದನ್ನು ನೆಚ್ಚಿಕೊಳ್ಳುವುದು ಮಾನವ ಸಹಜ ಗುಣ.ಆದ್ದರಿಂದ ಈ ಎಲ್ಲ ನಂಬಿಕೆಗಳು ನಮ್ಮ ಮನಸ್ಸಿಗೆ ಸಮಾಧಾನ ಪಡೆಯಲು ಮನುಷ್ಯ ಕಂಡುಕೊಂಡಿರುವ ದಾರಿ ಅನ್ನೊದು ನನ್ನ ಅಭಿಪ್ರಾಯ.

chitra said...

humm..so phylosophical...Ranjana..u write so well yaar.
i wish i could write kannada blogs ...but my vocabulary is soo poor.
ranjana and gowtham..plz make an option for followers..so that i can read these stuffs regularly.

Gowtham said...

@Chitra, Thanks :-)
Followers option is enabled.

Ranjana Gowtham said...

Thanks Chitra!