ನಮ್ಮ ದೇಹದ ಒಳಗೆ ಹೊರಗಿನ ಯಾವುದಾದರು ವಸ್ತು ಬಂದರೆ ಅದರೊಂದಿಗೆ ಹೋರಾಡಿ ಅದನ್ನು ಹೊರಹಕುತ್ತೆ. ಕಣ್ಣಿಗೆ ಧೂಳು ಹೋದ್ರೆ ಕಣ್ಣೀರಿನ ಜೊತೆ ಅದನ್ನ ಹೊರದಬ್ಬುತ್ತೆ. ಕಿವಿಗೆ ಏನಾದ್ರು ಹೋದ್ರು ಅಷ್ಟೆ ೫-೧೦ ನಿಮಿಷಕ್ಕೆ ತಾನಾಗೆ ಹೊರಬರುತ್ತೆ.
ಇನ್ನು ದೇಹದ ಒಳಗೆ ರೋಗಾಣುಗಳೆನದ್ರು ಹೊದ್ರೆ, ಬಿಳಿ ರಕ್ತ ಕಣಗಳು ಅದ್ರ ವಿರುದ್ದ ಹೋರಡಿ ಅದನ್ನ ಸಾಯಿಸಿ ಹಾಕುತ್ತೆ.
ಅಂದ್ರೆ, ತನ್ನದಲ್ಲದ ಯಾವುದೇ ವಸ್ತೂನು ತನ್ನಲ್ಲಿ ಇಟ್ಕೊಳೊಳ್ಳ ಅಂತಾಯ್ತು, ಒಂದೊಮ್ಮೆ ಅದ್ನ ಹೊರಗೆ ಹಾಕೊಕ್ಕೆ ಅಗ್ಲಿಲ್ಲ ಅಂದ್ಕೊಳಿ, ಅಗ ಮನುಷ್ಯ ಸಾಯೊ ಸಾಧ್ಯತೆ ಹೆಚ್ಚು. ಇದನ್ನ ಸ್ವಲ್ಪ ಆಳವಾಗಿ ಯೋಚನೆ ಮಾಡಿ ನೋಡಿ, ಇದರ ಹಿಂದೆ ಅದ್ಭುತವಾದ ತತ್ವ ,ಸಂದೇಶ ಇದೆ. ಒಂದು, ನಮ್ಮದಲ್ಲದ್ದನ್ನ ಇಟ್ಕೊಳ್ಳೊದು ತಪ್ಪ. ಇನ್ನೊಂದು, ಹಾಗೆ ಇಟ್ಕೊಂದ್ರೆ ಬದುಕೊ ಯೋಗ್ಯತೆ ಕಳ್ಕೊತೇವೆ!
ಇದು ಎಲ್ಲರಿಗೂ ಗೊತ್ತಿರೋ ಸತ್ಯ. ಆದ್ರೂ ಎಷ್ಟು ಜನ ತಮ್ಮದಲ್ಲದ ಹಣ, ಹೊನ್ನಿಗಾಗಿ ಬಡಿದಾಡ್ತಾರೆ? ಎಲ್ಲದು ನನಗೆ ಬೇಕು ಅನ್ನೊ ದುರಾಸೆಯಿಂದ ಜೀವನದ ಆನಂದವನ್ನೆಲ್ಲ ಹಾಳು ಮಾಡ್ಕೋತಾರೆ? ಬರಿ ಜೈವಿಕ ಕ್ರಿಯೆಯಿಂದ ದೇಹವು ಮಾಡುವ ಕೆಲಸವನ್ನ, ಬುದ್ಧಿವಂತಿಕೆ, ಚಿಂತನಾ ಶಕ್ತಿ, ಸ್ವಾಭಿಮಾನ ಎಲ್ಲ ಇರುವ ಮನುಷ್ಯ ಮಾಡಲಾರನೆ?
1 comment:
ತಮ್ಮದಲ್ಲದ ಹೊನ್ನಿಗಾಗಿ, ಮಣ್ಣಿಗಾಗಿ, ಯಾರೂ ಬಡಿದಾಡಲ್ಲ. ತಮ್ಮದಕ್ಕಾಗಿ ಮಾತ್ರ ಬಡಿದಾಡ್ತಾರೆ. ಇನ್ನೂ ಬಿಡಿಸಿ ಹೇಳ್ಬೇಕಂದ್ರೆ, ಆ ಹೊನ್ನು ಅಥವಾ ಮಣ್ಣು ತಮ್ಮದೇ ಅಂದುಕೊಂಡಿರ್ತಾರೆ, ಅಷ್ಟೇ, ಯಾವಾಗಲೂ ಮೂರನೇ ವ್ಯಕ್ತಿಗೆ ಗೊತ್ತಾಗುತ್ತೆ, ಅದು ಯಾರಿಗೆ ಸೇರಬೇಕೆಂದು. :-) ತಮ್ಮ ಬುದ್ಧಿವಂತಿಕೆ, ಚಿಂತನಾ ಶಕ್ತಿ ಅದಕ್ಕೆ ವಿನಿಯೋಗವಾಗತ್ತೆ.
Post a Comment