Tuesday, October 19, 2010

೧ ಜ್ಯೋತಿರ್ವರ್ಷವೆಂದರೆ ...

ಮೃತ್ಯು ರವರ ಅಕ್ಷೋಹಿಣಿ ಮತ್ತು ಕಪಿಸೇನೆ ಬ್ಲಾಗ್ ಓದುತ್ತಿದ್ದಂತೆ ಖಗೋಳ ಶಾಸ್ತ್ರದಲ್ಲಿ ಉಪಯೋಗಿಸುವ ಜ್ಯೋತಿರ್ವರ್ಷವನ್ನು ನಮ್ಮ ದಿನನಿತ್ಯದ ಬಳಕೆಯ ಕಿ.ಮೀ. ಗಳಲ್ಲಿ ವ್ಯಕ್ತಪಡಿಸುವ ಯೋಚನೆ ಬಂತು. ಸರಿ ನೋಡೇಬಿಡೋಣ ಅಂತ ಕುಳಿತೆ.

ಜ್ಯೋತಿರ್ವರ್ಷ ದೂರದ ಮಾಪನ. ಬೆಳಕು ಒಂದು ವರ್ಷಕ್ಕೆ ಎಷ್ಟು ದೂರ ಚಲಿಸುತ್ತದೋ ಅಷ್ಟು ದೂರವೇ ಒಂದು ಜ್ಯೋತಿರ್ವರ್ಷ.

ಬೆಳಕಿನ ವೇಗ ೧ ಕ್ಷಣಕ್ಕೆ ೩,೦೦,೦೦೦ ಕಿ.ಮೀ.
೧ ನಿಮಿಷ = ೬೦ ಕ್ಷಣ = ೬೦ x ೩೦೦೦೦೦ = ೧,೮೦,೦೦,೦೦೦ ಕಿ.ಮೀ.
೧ ಘಂಟೆ = ೬೦ ನಿಮಿಷ = ೬೦ x ೧೮೦೦೦೦೦೦ = ೧೦೮,೦೦,೦೦,೦೦೦ ಕಿ.ಮೀ.
೧ ದಿನ = ೨೪ ಘಂಟೆ = ೨೪ x ೧೦೮೦೦೦೦೦೦೦ = ೨,೫೯೨,೦೦,೦೦,೦೦೦ ಕಿ.ಮೀ.
೧ ವರ್ಷ = ೩೬೫ ದಿನ = ೩೬೫ x ೨೫೯೨೦೦೦೦೦೦೦ = ೯,೪೬,೦೮೦,೦೦,೦೦,೦೦೦ ಕಿ.ಮೀ.

ಹಾಗಾಗಿ ೧ ಜ್ಯೋತಿರ್ವರ್ಷವೆಂದರೆ ೯ ಲಕ್ಷದ ೪೬ ಸಾವಿರದ ೮೦ ಕೋಟಿ ಕಿ.ಮೀ. ಗಳು!