Monday, August 1, 2011

ನಾಗಲಿಂಗ ಪುಷ್ಪ


ಮಧ್ಯದಲ್ಲಿ ಲಿಂಗ, ಹೆಡೆಯಂತೆ ಅದನ್ನಾವರಿಸುವ ಆಕಾರ, ಹೂವಿಗೆ ನಾಗಲಿಂಗ ಎಂಬ ಹೆಸರನ್ನು ನೀಡಿದೆ. ಮರದ ಕಾಂಡದಿಂದ ಹೊರಡುವ ಉದ್ದನೆಯ ಬಿಳಲಿನಲ್ಲಿ ಹೂವು ಅರಳುತ್ತದೆ. ಲಿಂಗದ ಸುತ್ತಲು ದಳಗಳು ಅಥವಾ ಹೂವಿನ ಪಕಳೆಗಳು ಇರುತ್ತದೆ.

ಹೂವು ಎಷ್ಟು ಸುವಾಸನೆ ಬೀರುತ್ತದೆಯೋ, ಇದರಲ್ಲಿ ಬಿಡುವ ಕಾಯಿ ಉದುರಿ ಒಡೆದು ಹೋದಾಗ ಅಷ್ಟೇ ದುರ್ವಾಸನೆ ಬೀರುತ್ತದೆ. ಬೆಂಗಳೂರಿನ ಅನೇಕ ರಸ್ತೆಗಳಲ್ಲಿ ಮರವು ಸಾಲುಮರವಾಗಿ ಕಾಣಸಿಗುತ್ತದೆ. ಇದರ ಕಾಯಿಯ ಗಾತ್ರ ಸಕ್ಕರೆ ಕಂಚಿಯನ್ನು (ಚಕೋತ ಹಣ್ಣು) ಹೋಲುತ್ತದೆ. ಮರದ ನೆರಳಿನಲ್ಲಿ ನಿಮ್ಮ ಕಾರನ್ನೂ ಬೈಕನ್ನೋ ನಿಲ್ಲಿಸುವಾಗ ಜೋಕೆ! ಕಾಯಿ ಬಿತ್ತೆಂದರೆ ನಿಮ್ಮ ಕಾರಿನ ಗಾಜು ಒಡೆಯಬಹುದು ಅಥವಾ ಡೆಂಟ್ ಆಗಬಹುದು!

ಅಂದ ಹಾಗೆ ಮರದ ಮೂಲ ದಕ್ಷಿಣ ಅಮೆರಿಕಾದ ಅಮೆಜಾನ್ ಕಾಡು. ಹೂವಿನಲ್ಲಿ ಮಕರಂದ ಇರುವುದಿಲ್ಲವಂತೆ! ಶಿವನಿಗೆ ಅತ್ಯಂತ ಶ್ರೇಷ್ಠವಂತೆ. ಕೈಲಾಸಪತಿಯೇ ವಿದೇಶಿ ವಸ್ತುವಿಗೆ ಮಾರುಹೋದಮೇಲೆ ನಾವು ವಿದೇಶಿ ವಾಚು, ವಿದೇಶಿ ಬಟ್ಟೆಗಳಿಗೆ ಮರುಳಗುವುದು ಆಶ್ಚರ್ಯವೇನಲ್ಲ ಬಿಡಿ!

5 comments:

Gowtham said...

ಶಿವ ವಿದೇಶಿ ವಸ್ತುವಿಗೆ ಮಾರುಹೊಗಿದ್ದು ಚೆನ್ನಾಗಿದೆ. :-)

Mridula said...

Lovely.

Vetirmagal said...

Beautiful !!

Ranjana Gowtham said...

Thanks Mridula and Jayalakshmi!

MANJU VHP MANDYA said...

ಮಿತ್ರರೇ ಈ ಮರದ ಮೂಲ ನಮ್ಮ ಭಾರತವಾಗಿದ್ದು . ಈ ನಾಗಲಿಂಗ ಮದುವೆಯಾಗಿ ಬಹಳ ವರ್ಷವಾದರೂ ಮಕ್ಕಳಾಗಲಿಲ್ಲ ಎಂದು ಸಿಕ್ಕ ಸಿಕ್ಕಕದೆ ಸ್ಕ್ಯಾನಿಂಗ್ ಮಾಡಿಸಿಕೊಂಡರೂ ಕೂಡ ನಿಮ್ಮ ಸ್ಪರ್ಮ್ ಕೌಂಟ್ ಕಡಿಮೆ ಇದ್ದರೆ ಈ ಪುಷ್ಪವನ್ನು ಅರೆದು ಆಕಳ ಹಾಲಿನೊಂದಿಗೆ ಬೆರಸಿ ಕುಡಿಯಿರಿ , ಒಂದು ಮಂಡಲ (೪೫ ದಿನದ ಬಳಿಕ ಟೆಸ್ಟ್ ಮಾಡಿಸಿ ನಿಮ್ಮ ಸ್ಪರ್ಮ್ ದ್ವಿಗುಣ ವಾಗುವುದು ಖಂಡಿತ . ಹೆಂಗಸರಾದರೆ ಮುಟ್ಟಾದ ೩-೪ ದಿನದ ನಂತರ ಈ ಹೂವನ್ನು ಅರೆದು ಆಕಳ ಹಾಲಿನಲ್ಲಿ ಮಲಗುವ ಅರ್ಧ ಘಂಟೆ ಮೊದಲು ಸತತ ೭ ದಿನ ಸೇವಿಸಿದರೆ ಗರ್ಭವತಿಯಾಗುವುದು ನಿಜ...